ಬೆಳಗಾವಿ, ಡಿ, 23 (daijiworldNews/MR): ಹಿಜಾಬ್ ಹಿಂಪಡೆಯುವ ಕುರಿತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪೇಜಾವರ ಶ್ರೀಗಳು ಆಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ವಿವಿಧ ಗುಂಪುಗಳಿಗೆ ವಿಭಿನ್ನ ಕಾನೂನುಗಳನ್ನು ಜಾರಿಗೊಳಿಸುವುದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಕರ್ನಾಟಕದ ಎಲ್ಲಾ ಪಂಗಡಗಳಿಗೆ ಸಿಎಂ ಆಗಿದ್ದಾರೆ. ಕೇವಲ ಒಂದು ನಿರ್ದಿಷ್ಟ ಗುಂಪಿಗೆ ಮಾತ್ರ ಸೇರಿದವರಲ್ಲ. ಈ ರೀತಿಯ ನಡವಳಿಕೆಯು ಸಮಾಜದ ಜನರನ್ನು ನಿಜವಾಗಿಯೂ ಗೊಂದಲಗೊಳಿಸುತ್ತದೆ. ಈ ಹಿಂದೆ, ಪರೀಕ್ಷೆಯ ಸಮಯದಲ್ಲಿ, ಹಿಂದೂಗಳು ತಮ್ಮ ಕಾಲುಂಗರ, ತಾಳಿ ತಗೆಯಬೇಕು ಎಂದಿದ್ದರು, ಮತ್ತೊಂದು ಪಂಗಡದವರಿಗೆ ಯಾವ ರೀತಿ ಬೇಕಾದರೂ ಹೋಗಬಹುದು ಎನ್ನುತ್ತಾರೆ.
ಈ ರೀತಿಯ ನಡವಳಿಕೆ ಸರಿಯಲ್ಲ, ಇದನ್ನ ಯಾರು ಮಾಡಬಾರದು, ಮುಖ್ಯವಾಗಿ ಸಿಎಂ ಆಗಿ ಇವರು ಇಂತಹ ತಪ್ಪು ಮಾಡಬಾರದು ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.