ಕೋಲ್ಕತ್ತಾ, ,ಡಿ, 23 (daijiworldNews/AK): ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಖಾನ್ ಅವರು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಶನಿವಾರ ವೈದ್ಯರು ತಿಳಿಸಿದ್ದಾರೆ.
55 ವರ್ಷದ ಖಾನ್ ಅವರನ್ನು ವೆಂಟಿಲೇಶನ್ನಲ್ಲಿ ಇರಿಸಲಾಗಿದೆ. ಮೊದಲು ಚಿಕಿತ್ಸೆಗೆ ಉತ್ತಮವಾಗಿ ಅವರು ಸ್ಪಂದಿಸುತ್ತಿದ್ದರು.ಆದರೆ ಸೆರೆಬ್ರಲ್ ಅಟ್ಯಾಕ್ ನಂತರ, ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿದೆ.
ಅವರ ಸ್ಥಿತಿ ಈಗ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ನಮ್ಮ ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದಾರೆ" ಎಂದು ವೈದ್ಯಧೀಕಾರಿ ತಿಳಿಸಿದ್ದಾರೆ.