ಕಲಬುರುಗಿ,ಡಿ24 (daijiworldNews/RA): ಕಲಬುರುಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮ ಸದ್ಯ ವಿಶೇಷ ಕಾರಣವೊಂದಕ್ಕೆ ಸುದ್ದಿಯಲ್ಲಿದೆ. ಈ ಗ್ರಾಮದಲ್ಲಿ ಸಾಫ್ಟ್ ವೇರ್ ಎಂಜನಿಯರ್ ,ಬ್ಯಾಕಿಂಗ್ ಮತ್ತಿತರ ಕ್ಷೇತ್ರಗಳಂತೆ ದನಗಾಹಿಗಳು ಕೂಡ ಇಲ್ಲಿ ತಿಂಗಳಿಗೆ 90 ಸಾವಿರ ರೂಪಾಯಿ ವೇತನವನ್ನು ದುಡಿತಾ ಇದ್ದಾರೆ.
ಸುಮಾರು 5 ಸಾವಿರ ಜನಸಂಖ್ಯೆಯನ್ನು ಈ ಗ್ರಾಮ ಹೊಂದಿದ್ದು ಈ ಹಿಂದೆ ವ್ಯವಸಾಯವೇ ಇವರ ಮೂಲ ಕಸುಬಾಗಿತ್ತು.ಈಗ ಇಲ್ಲಿ ಸಿಮೆಂಟ್ ಕಾರ್ಖಾನೆ ಆರಂಭವಾಗಿದ್ದು ಗ್ರಾಮಸ್ಥರು ಅದಕ್ಕೆ ತಮ್ಮ ಜಮೀನು ನೀಡಿ ತಾವು ಇತರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಹಸು ಸಾಕಾಣಿಕೆಯನ್ನು ಈಗಲೂ ಮಾಡ್ತಾ ಇದ್ದಾರೆ.ಇಲ್ಲಿ ಪ್ರತಿ ಮನೆಗಳಲ್ಲೂ ದನಕರುಗಳಿದ್ದು ಒಟ್ಟು ಸುಮಾರು 2 ಸಾವಿರ ರಾಸುಗಳಿವೆ ಅನ್ನುವ ಮಾಹಿತಿ ಇದೆ.
ಇನ್ನು ಹೊರಗಡೆ ಈ ಗ್ರಾಮದ ಕೆಲವರು ಕೆಲಸಕ್ಕೆ ಹೊರಗಡೆ ಹೋಗುವುದರಿಂದ ಹಸುಕರು ಮೇಯಿಸಲು ಆಗುವುದಿಲ್ಲ. ಇದಕ್ಕೆ ಒಂದು ಉಪಾಯ ಮಾಡಿದ ಗ್ರಾಮದ ಐದಾರು ಮಂದಿ ಯುವಕರು ಸೇರಿ ಒಂದು ತಂಡ ಕಟ್ಟಿ ಇಡೀ ಗ್ರಾಮದ ಎಲ್ಲ ಜಾನುವಾರುಗಳನ್ನು ಊರಾಚೆಗಿನ ಅಡವಿಗೆ ಮೇಯಿಸಲು ಕರೆದುಕೊಂಡು ಹೋಗುತ್ತಾರೆ.
ಪ್ರತಿ ಹಸುವಿಗೆ ಮಾಸಿಕ 450 ರೂ.ನಿಗದಿ ಮಾಡಿದ್ದಾರೆ. ಈ ತಂಡದಲ್ಲಿ ಒಬ್ಬ ಯುವಕ ಸುಮಾರು 200 ದನಗಳನ್ನು ಮೇಯಿಸುತ್ತಾನೆ ಅಂತ ಹೇಳಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಯುವಕ ತಿಂಗಳಿಗೆ 90 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.