ನವದೆಹಲಿ,ಏ19(Daijiworld News/AZM) : ಜೆಟ್ ಏರ್'ವೇಸ್ ಅನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ಯಾಂಕ್ ಒಕ್ಕೂಟಗಳು ಪತ್ರ ಬರೆದಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಏರ್'ಲೈನ್ಸ್ ಗೆ ಬ್ಯಾಂಕುಗಳು ಸಾಲ ನೀಡದಿರುವಂತೆ ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಅಸೋಸಿಯೇಷನ್ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
400 ಕೋಟಿ ರೂ. ಮಧ್ಯಂತರ ಹಣಕ್ಕೆ ಸಾಲದಾತರು ನಿರಾಕರಿಸಿದ ಬಳಿಕ, ಜೆಟ್ ಏರ್'ವೇಸ್ ಕಳೆದ ಬುಧವಾರದಿಂದ ತನ್ನ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿದೆ. ಬ್ಯಾಂಕುಗಳು ಜೆಟ್ ಏರ್'ವೇಸ್ ಕಂಪನಿಗೆ ಹೆಚ್ಚಿನ ರೀತಿಯ ಸಾಲ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.