ದೆಹಲಿ,ಡಿ 25 (DaijiworldNews/PC ): ಕೇಂದ್ರ ಸರ್ಕಾರದ ಯೋಜನೆಗಳು ಕ್ರಿಶ್ಚಿಯನ್ ಸಮುದಾಯದ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಬಡವರಿಗೆ ಹಾಗೂ ವಂಚಿತರಿಗೆ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೆಹಲಿಯ 7 ಲೋಕ್ ಕಲ್ಯಾಣ್ ಮಾರ್ಗ್ನಲ್ಲಿ ಆಯೋಜಿಸಿದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮದ ಜನರೊಂದಿಗೆ ಮಾತನಾಡಿದ ಅವರು ಕ್ರೈಸ್ತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ,
ಕೆಲವು ವರ್ಷಗಳ ಹಿಂದೆ ಪೋಪ್ ಅವರನ್ನು ಭೇಟಿಯಾಗಿದ್ದೆ, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದೆವು. ಇನ್ನು ಇಂದು ಯೇಸ್ ಅವರು ಜನಿಸಿದ ದಿನ, ಇದೊಂದು ಪ್ರಮುಖ ದಿನವಾಗಿದೆ. ಹಾಗಾಗಿ ಇದನ್ನು ಕ್ರಿಸ್ಮಸ್ ಎಂದು ಆಚರಣೆ ಮಾಡುತ್ತೇವೆ ಹೇಳಿದರು.
ಇಂದು ಬೆಳಿಗ್ಗೆ ಕ್ರೈಸ್ತ ಧರ್ಮದ ಜನರಿಗೆ ಎಕ್ಸ್ನಲ್ಲಿ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದರು.
ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಯೋಜನಗಳು ಕ್ರಿಶ್ಚಿಯನ್ ಸಮುದಾಯದ ಅನೇಕ ಜನರನ್ನು, ವಿಶೇಷವಾಗಿ ಬಡವರು ಮತ್ತು ವಂಚಿತರನ್ನು ತಲುಪುತ್ತಿದೆ ಎಂದರು.
ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ಮಂತ್ರವನ್ನು ನಂಬುತ್ತೇವೆ. ನಮ್ಮ ಸರ್ಕಾರದ ಎಲ್ಲ ಯೋಜನೆಗಳು ಸಕಾಲದಲ್ಲಿ ಎಲ್ಲರಿಗೂ ತಲುಪುವಂತೆ ಮಾಡಿದ್ದೇವೆ. ಅದರಿಂದ ಯಾರು ವಂಚಿತರಾಗಬಾರದು ಎಂದು ಪ್ರಧಾನಿ ಹೇಳಿದರು.