ನವದೆಹಲಿ, ಏ 20(Daijiworld News/MSP): ವೀರ ಮರಣವನ್ನಪ್ಪಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕೇರೆಯವರು ಸಾವನ್ನಪ್ಪಿದ್ದು ನನ್ನ ಶಾಪದಿಂದ ಎಂದು ಹೇಳಿಕೆ ನೀಡಿ, ವಿವಾದಕ್ಕೀಡಾಗಿದ್ದ ಬಿಜೆಪಿ ಮುಖಂಡೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಹೇಮಂತ್ ಕರ್ಕರೆ ವೀರ ಮರಣವನ್ನಪ್ಪಿದವರು, ಅವರು ಶತ್ರುರಾಷ್ಟ್ರದವರ ಗುಂಡಿಗೆ ಬಲಿಯಾದವರು ನನ್ನ ಮಾತಿನಿಂದ ದೇಶದೊಳಗಿನ ಶತ್ರುಗಳು ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾರೆ. ಹೀಗಾಗಿ ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೇಳುತ್ತಿದ್ದೇನೆ. ಈ ಮಾತು ನನ್ನ ವೈಯಕ್ತಿಕ ನೋವು ಆಗಿತ್ತು ಎಂದು ಸಾದ್ವಿ ಪ್ರಗ್ಯಾ ಹೇಳಿದ್ದಾರೆ.
ಸಾಧ್ವಿ ಪ್ರಗ್ಯಾ ಸಿಂಗ್, ಮಾಲೇಗಾಂವ್ ಸ್ಫೋಟದ ಆರೋಪಿಯಾಗಿದ್ದಾರೆ. ತನ್ನ ವಿರುದ್ಧವಿರುವ ಪ್ರಕರಣದ ವಿಚಾರಣೆ ವೇಳೆ ಕರ್ಕರೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದರು. ಆಗ ನಾನು ನೀನು ಸರ್ವನಾಶ ಆಗುತ್ತೀಯಾ ಎಂದು ಶಾಪ ನೀಡಿದ್ದೆ. ನನ್ನ ಶಾಪದಿಂದಾಗಿ ಕರ್ಕರೆ ಸತ್ತರು ಎಂದು ಹೇಳಿಕೆ ನೀಡಿದ್ದರು.