ಬೆಂಗಳೂರು,ಡಿ 28 (DaijiworldNews/PC): ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯದ ವಿವಿದೆಡೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದು ಈಗ ಕನ್ನಡ ಒಕ್ಕೂಟದಿಂದ ಕನ್ನಡ ಬೆಳೆಸಿ ಕನ್ನಡ ಉಳಿಸಿ ಚಳುವಳಿಗೆ ಕರೆ ನೀಡಲಾಗಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಿಸೆಂಬರ್ 30ರಂದು ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ತಿಂಗಳು ಡಿ.30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ನಡೆಸಲಾಗುವುದು ಎಂದು ಹೇಳಿದರು. ಅಲ್ಲದೇ ಸರ್ಕಾರಕ್ಕೆ ಪ್ರಮುಖ ಒತ್ತಾಯಗಳನ್ನು ಮಾಡಲು ತೀರ್ಮಾನಿಸಿವೆ ಎಂದರು.
ಸರ್ಕಾರಕ್ಕೆ ಪ್ರಮುಖ ಒತ್ತಾಯಗಳು
ಕನ್ನಡದಲ್ಲೇ ಕಡ್ಡಾಯವಾಗಿ ನಾಮಫಲಕಗಳು ಇರಲೇಬೇಕು.
ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಯಲೇಬೇಕು.
ಪದವೀಧರರಿಗೆ ಉದ್ಯೋಗ ನೀಡಲೇಬೇಕು.
ಪರಭಾಷೆಯವರ ದಾಂಧಲೆ ನಿಲ್ಲಲೇಬೇಕು.
ರೈಲ್ವೆಯಲ್ಲಿ ಹಾಗೂ ಬ್ಯಾಂಕುಗಳಲ್ಲಿ ಕನ್ನಡ ಬೇಕೇ ಬೇಕು.
ಐಟಿ-ಬಿಟಿಗಳಲ್ಲಿ ಹಾಗೂ ಅಂಗಡಿ ಮಾಲ್ಗಳಲ್ಲಿ ಕನ್ನಡ ಇರಲೇಬೇಕು,
ಹಿಂದಿ ಹೇರಿಕೆ ಬೇಡವೇ ಬೇಡ.
ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದಲ್ಲೇ ತೀರ್ಪು ಬರಬೇಕೆಂದು ಒತ್ತಾಯ