ದೆಹಲಿ,ಡಿ 28 (DaijiworldNews/PC): ಅದೆಷ್ಟೋ ಹಿಂದೂ ಗಳ ಕನಸಿನ ಅಯೋಧ್ಯೆಯ ರಾಮಮಂದಿರ ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆ ಗೊಳ್ಳಲಿದ್ದು ಈ ರಾಮ ಮಂದಿರದಲ್ಲಿ 600 ಕೆಜಿ ತೂಕದ ಗಂಟೆಯು ಬೃಹತ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ. ಲೋಹದಿಂದ ಮಾಡಲಾದ ಗಂಟೆಯ ಮೇಲೆ ‘ಜೈ ಶ್ರೀ ರಾಮ್’ ಎಂಬ ದೊಡ್ಡದಾಗಿ ಕೆತ್ತಲಾಗಿದೆ.
ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 8,000 ಗಣ್ಯರನ್ನು ಆಹ್ವಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಸಂಪೂರ್ಣ ರಚನೆಯ ನಿರ್ಮಾಣಕ್ಕೆ ಒಟ್ಟು 21-22 ಲಕ್ಷ ಘನ ಅಡಿ ಕಲ್ಲು ಬಳಸಲಾಗಿದೆ. “ಕಳೆದ 100-200 ವರ್ಷಗಳಲ್ಲಿ ಉತ್ತರ ಅಥವಾ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಕಲ್ಲಿನ ರಚನೆಯನ್ನು ನಿರ್ಮಿಸಲಾಗಿಲ್ಲ” ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.