ನವದೆಹಲಿ, ಡಿ 29 (DaijiworldNews/MS): ಲೋಕಸಭೆ ಚುನಾವಣೆಗೆ ತಿಂಗಳುಗಳು ಬಾಕಿಯಿರುವಂತೆಯೇ, ಜೆಡಿಯು (JDU) ಪಕ್ಷದ ಚುಕ್ಕಾಣಿಯಲ್ಲಿ ಶುಕ್ರವಾರ ಬದಲಾವಣೆಯನ್ನು ಕಂಡಿದೆ. ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರದ ಸಿಎಂ ನಿತೀಶ್ ಕುಮಾರ್ ನೇಮಕಗೊಂಡಿದ್ದಾರೆ.
ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ರಂಜನ್ ಸಿಂಗ್, ಲಾಲನ್ ಸಿಂಗ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಜೀವ್ ರಂಜನ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಯು ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕಗೊಂಡಿದ್ದಾರೆ
ಡಿಸೆಂಬರ್ 29 ರಂದು ದೆಹಲಿಯಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಟ್ನಾದಲ್ಲಿ ಇತ್ತೀಚೆಗೆ ನಡೆದ ಸಭೆಯ ನಂತರ ಪ್ರಸ್ತುತ ಜೆಡಿಯು ಮುಖ್ಯಸ್ಥ ಲಾಲನ್ ಸಿಂಗ್ ಅಧಿಕಾರದಿಂದ ಕೆಳಗಿಳಿದ್ದರು.
ಆಯ್ಕೆ ಸಭೆಯ ವೇಳೆ ಸಭಾಂಗಣದ ಹೊರಗೆ ಜೆಡಿಯು ಕಾರ್ಯಕರ್ತರು 'ನಿತೀಶ್ ಕುಮಾರ್ ಫಾರ್ ಪಿಎಂ' ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.