ಬೆಳಗಾವಿ, 31 (DaijiworldNews/AK): ಮುಂದಿನ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದಯು, ಟಿಕೆಟ್ ಕೊಟ್ಟರೆ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ನನ್ನ ಮಗ ಕಾಂತೇಶ್ಗೆ ಟಿಕೆಟ್ ಗಾಗಿ ಪ್ರಯತ್ನಿಸಿದ್ದು, ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲಿಸುತ್ತೇನೆ. ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡ್ತಾನೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ಅಂತ ಹೋಗುತ್ತಿದ್ದರು. ಆದ್ರೆ ಹಿಂದುಳಿದವರು, ದಲಿತರು ಕೈಬಿಟ್ಟರು, ಇನ್ನು ಉಳಿದಿರೋದು ಅಲ್ಪಸಂಖ್ಯಾತರು ಮಾತ್ರ. ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನೋದು ಸಿದ್ದರಾಮಯ್ಯರ ಲೆಕ್ಕ. ದೇಶದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ ಎಂದು ಆರೋಪಿಸಿದರು.
ರಾಮಮಂದಿರ ಆಗಬಾರದು ಅಂತಾ ಕೋರ್ಟಿಗೆ ಹೋದವರು ಈಗ ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಪಾಕಿಸ್ತಾನದವರು ಮೋದಿಯಂತಹ ಪ್ರಧಾನಿ ನಮಗೆ ಇರಬೇಕಿತ್ತು ಎನ್ನುತ್ತಾರೆ. ಈ ಮದ್ಯೆ ಹಿಂದೂ ಮುಸ್ಲಿಂ ಒಟ್ಟಾಗಬಾರದು ಅನ್ನೋದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಉದ್ದೇಶ ಎಂದು ದೂರಿದರು.
ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಸ್ಟಂಟ್ ಮಾಡ್ತಿದೆ. ಮೊದಲು ಬಿಜೆಪಿಯವರು ರಾಮಮಂದಿರ ಕಟ್ಟಿಲ್ಲ ಅನ್ನುತ್ತಿದ್ದರು. ಈಗ ಪ್ರಿಯಾಂಕ್ ಖರ್ಗೆಯವರು ರಾಮಮಂದಿರ ಕಟ್ಟಾಯಿತು, ರಾಮರಾಜ್ಯ ಯಾವಾಗ? ಅಂತಾರೆ. ಇಂತಹ ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು