ಚಿತ್ರದುರ್ಗ,ಜ.01 (DaijiworldNews/PC): ಚಿತ್ರದುರ್ಗದ ಮನೆಯೊಂದರಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥರೆಡ್ಡಿ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಹಲವು ಅನುಮಾನಕ್ಕೆ ಕಾರಣವಾಗಿದೆ.
ಚಿತ್ರದುರ್ಗದ ನಿವೃತ್ತ ಇಂಜಿಯರ್ ಜಗನ್ನಾಥರೆಡ್ಡಿ ಅವರ ಜಮೀನು ಇದೆ. ಈ ಜಮೀನು ವಿಚಾರವಾಗಿ ರವಿ ಮತ್ತು ವಿಶ್ವಾಸ್ ಎಂಬುವರು ಜಗನ್ನಾಥರೆಡ್ಡಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ನರೇಂದ್ರರೆಡ್ಡಿ ವಿರುದ್ಧ ಡಕಾಯಿತಿ ಮತ್ತು ವಂಚನೆ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಜಗನ್ನಾಥರೆಡ್ಡಿ ಅವರಿಗೆ ಕಿರುಕುಳ ನೀಡಿದ್ದಾರೆ. ಪುತ್ರ ನರೇಂದ್ರರೆಡ್ಡಿಯನ್ನು ಪ್ರಕರಣದಿಂದ ಮುಕ್ತಿಪಡೆಸಲು ಜಗನ್ನಾಥರೆಡ್ಡಿ ಅಪಾರ ಹಣ ಖರ್ಚು ಮಾಡಿದ್ದರು. ಈ ಎಲ್ಲಾ ಘಟನೆಯಿಂದ ಮಾನಸಿಕವಾಗಿ ನೊಂದು, ಜಗನ್ನಾಥರೆಡ್ಡಿ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖವಾಗಿದೆ.
ಈ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಹಾಗೂ ಪಾಳು ಬಿದ್ದ ಮನೆಯಲ್ಲಿ ಅನೇಕ ಸಲ ಕಳ್ಳರು ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪತ್ತೆಯಾದ ಫಿಂಗರ್ ಪ್ರಿಂಟ್ ಮತ್ತು ಇತರೆ ದಾಖಲೆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.