ಮದ್ಯಪ್ರದೇಶ, ಜ 03(DaijiworldNews/MS): ನಮೀಬಿಯಾದಿಂದ ಭಾರತದ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನ ಸ್ಥಳಾಂತರಗೊಂಡಿದ್ದ ಸಿಯಾಯಾ ಎಂದು ಕರೆಯಲ್ಪಡುವ ಚಿರತೆ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದೆ.
"Purrs in the wild! ಕುನೋ ರಾಷ್ಟ್ರೀಯ ಉದ್ಯಾನವನವು ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹಂಚಿಕೊಳ್ಳಲು ರೋಮಾಂಚನವಾಗುತ್ತಿದೆ. ನಮೀಬಿಯಾದ ಚಿರತೆ ಆಶಾಗೆ ಮರಿಗಳು ಜನಿಸಿವೆ" ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿಹಂಚಿಕೊಂಡಿದ್ದಾರೆ.
2023 ರ ಮಾರ್ಚ್ ನಲ್ಲಿ" ಜ್ವಾಲಾ" ಎಂದು ಮರುನಾಮಕರಣಗೊಂಡ ಸಿಯಾಯಾ ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದಳು, ಆದರೆ ಅವುಗಳಲ್ಲಿ ಒಂದು ಮಾತ್ರ ಬದುಕುಳಿದಿತ್ತು.