ಬೆಂಗಳೂರು, ಜ 05 (DaijiworldNews/MS): ಬಸ್, ವ್ಯಾನ್ ಮುಂತಾದ ಶಾಲಾ ವಾಹನಗಳಲ್ಲಿ ಇನ್ಮುಂದೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಸಹಾಯಕರನ್ನೇ ನೇಮಿಸಿಕೊಳ್ಳು ವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ
ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಕರೆತರುವ ಕೆಲಸವನ್ನು ನಿರ್ವಹಿಸಲು ಸಹಾಯಕಿಯರ ಅಗತ್ಯವಿದೆ. ಇದಕ್ಕಾಗಿ ಮಕ್ಕಳ ರಕ್ಷಣೆಯ ಆದ್ಯತೆ ಮೇರೆಗೆ ಶಾಲಾಮುಖ್ಯಸ್ಥರು ಮತ್ತು ಆಡಳಿತಮಂಡಳಿ ಕ್ರಮವಹಿಸುಬೇಕು. ಇದನ್ನು ಎಲ್ಲಾ ಶಾಲೆಗಳು ಪಾಲಿಸಬೇಕು.
ಖಾಸಗಿ ಶಾಲೆಗಳ ಪ್ರತಿ ವಾಹನದಲ್ಲೂ ಸಿ.ಸಿ.ಟಿ.ವಿ. ಕ್ಯಾ ಮೆರಾ ಅಳವಡಿಸಬೇಕು, ಶಾಲಾ ವಾಹನಗಳನ್ನು ನಿರ್ವಹಿಸುವ ಚಾಲಕರು ಮತ್ತು ಸಹಾಯಕರು ಪ್ರತಿದಿನದ ಕೆಲಸ ಆರಂಭದ ಮೊದಲು ಮತ್ತು ಮುಕ್ತಾಯದ ನಂತರ ಶಾಲೆಗೆ ವಾಪಸ್ ಬಂದು, ಶಾಲಾಮುಖ್ಯಸ್ಥರ ಸಮ್ಮುಖದಲ್ಲಿ ಹಾಜರಾತಿ ಪುಸ್ತಕಕ್ಕೆ ಕಡ್ಡಾಯವಾಗಿ ಸಹಿಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಇದಲ್ಲದೇ ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಶಾಲೆಗಳಿಗೆ ಭೇಟಿ ನೀಡಿ, ಸುರಕ್ಷತೆಯ ಖಾತ್ರಿ ಪಡಿಸಬೇಕು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.