ಮೈಸೂರು, ,ಜ 7 (DaijiworldNews/AK): ಸರ್ಕಾರ ಪದವೀಧರರಿಗೆ ಹಣದ ಬದಲು ಉದ್ಯೋಗ ನೀಡಿಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು. ಕನ್ನಡಿಗರಿಗೆ ಉದ್ಯೋಗಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉದ್ಯೋಗದಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ನೀವು ಕೊಡುವ ದುಡ್ಡಿನಲ್ಲಿ ಅವರು ಕಾಫಿ ಕುಡಿಯಲು ಯೋಚನೆ ಮಾಡಬೇಕಾಗುತ್ತದೆ. ಹೀಗಿರುವಾಗ ಮೂರು ಸಾವಿರ, ಒಂದೂವರೆ ಸಾವಿರ ನೀಡುವ ಮೂಲಕ ಪದವೀಧರರಿಗೆ ಅಗೌರವ ತೋರಲಾಗುತ್ತಿದೆ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಪದವೀಧರರ ಸಮಸ್ಯೆ ಆಲಿಸಲು ಓಬ್ಬ ಸಚಿವರನ್ನ ನೇಮಕ ಮಾಡಿ. ಉನ್ನತ ಶಿಕ್ಷಣ ಮಾಡಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಮಠಾಧೀಶರ ಕಾಲೇಜುಗಳಲ್ಲಿ ಹೊರಗಿನ ರಾಜ್ಯದವರಿಗೆ ಸೀಟು ಕೊಟ್ಟಿದ್ದೀರಿ. ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದರು.