ಮುಂಬೈ, ಜ 11 (DaijiworldNews/HR): ಭಾರತದ ಅತೀ ಉದ್ದನೆಯ ಸಾಗರ ಸೇತುವೆ(ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್)ಯನ್ನು ಪ್ರದಾನಿ ನರೇಂದ್ರ ಮೋದಿ ಜನವರಿ 12ಎಂದು ಉದ್ಘಾಟಿಸಲಿದ್ದಾರೆ.
ಈ ಸೇತುವೆಯನ್ನು ದಕ್ಷಿಣ ಮುಂಬೈನಿಂದ ನವ ಮುಂಬೈವರೆಗೆ ಸಮುದ್ರದಲ್ಲಿ ನಿರ್ಮಿಸಲಾಗಿದ್ದು, ಇದು ಬರೋಬ್ಬರಿ 21.8 ಕಿಲೋ ಮೀಟರ್ ಉದ್ದದ ಸೇತುವೆಯಾಗಿದೆ.
ಇನ್ನು ದಕ್ಷಿಣ ಮುಂಬೈನಿಂದ ನವ ಮುಂಬೈವರೆಗೆ ಎರಡು ಗಂಟೆಗಳ ಪ್ರಯಾಣವನ್ನು ಇನ್ನು ಕೇವಲ 15-20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ಸೇತುವೆಯಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸಮಯ, ಇಂಧನ ಉಳಿತಾಯವಾಗಲಿದ್ದು, ಅಟಲ್ ಸೇತುವೆಯಲ್ಲಿ ನಾಲ್ಕು ಚಕ್ರದ ವಾಹನಗಳ ವೇಗದ ಮಿತಿ 100 ಕಿಲೋ ಮೀಟರ್. ಆದರೆ ಮೋಟಾರ್ ಬೈಕ್, ಆಟೋ ರಿಕ್ಷಾ ಮತ್ತು ಟ್ರ್ಯಾಕ್ಟರ್ ಗಳಿಗೆ ಈ ಸೇತುವೆ ಮೇಲೆ ಸಂಚರಿಸಲು ಅನುಮತಿ ಇಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.