ಮುಂಬೈ, ಜ 12 (DaijiworldNews/HR): ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಕೋಕೆನ್ ಕಳ್ಳಸಾಗಣೆ ಮಾಡುತ್ತಿದ್ದ ಥಾಯ್ ಯುವತಿಯನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ ಬಂಧಿಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಅಡ್ಡೀಸ್ ಅಬಾಬಾದಿಂದ ವಿಮಾನದಲ್ಲಿ ಆಗಮಿಸಿದ್ದ 21 ವರ್ಷದ ಯುವತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗಿತ್ತು. ಆಗ ಥಾಯ್ ಯುವತಿಯ ಟ್ರಾಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿಕ್ಕ, ಚಿಕ್ಕ ಪ್ಯಾಕೇಟ್ ಗಳಲ್ಲಿ ಅಡಗಿಸಿಟ್ಟಿದ್ದ ಕೋಕೆನ್ ಪೌಡರ್ ಪತ್ತೆಯಾಗಿತ್ತು. ಪೌಡರ್ ಪರೀಕ್ಷಿಸಿದಾಗ ಇದು ಕೋಕೆನ್ ಎಂಬುದು ದೃಢಪಟ್ಟಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಮೌಲ್ಯ 40 ಕೋಟಿ ರೂಪಾಯಿಯಾಗಿದೆ ಎಂದು ವರದಿಯಾಗಿದೆ.