ರಾಯಚೂರು, ಜ 12(DaijiworldNews/SK): ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜ 22 ರಂದು ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದೆ.
ಆದರೆ ಮಂದಿರವೇ ಸಂಪೂರ್ಣಗೊಳ್ಳದೇ ಉದ್ಘಾಟನೆ ಮಾಡುತ್ತಿರುವುದರಿಂದ ಶಂಕರ ಮಠದ ಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ ತಿಳಿಸಿದರು.
ಮಾಧ್ಯಮಕ್ಕೆ ಪ್ರಿಕ್ರಿಯಿಸಿದ ಅವರು, ಶ್ರೀರಾಮನು ಕೇವಲ ಬಿಜೆಪಿಗೆ ಮಾತ್ರ ಸೀಮಿತವಲ್ಲ ದೇಶದ ಪ್ರತಿಯೊಬ್ಬರ ಜೊತೆಯೂ ಶ್ರೀರಾಮ ಇದ್ದಾನೆ. ಇದೀಗ ಮಂದಿರ ಸಂಪೂರ್ಣಗೊಳ್ಳದೇ ಉದ್ಘಾಟನೆ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮ ಕೇವಲ ಬಿಜೆಪಿಯವರಿಗೆ ಮಾತ್ರ ಸಿಮೀತವಲ್ಲ. ಎಲ್ಲಾ ಜನರ ಮನದಲ್ಲೂ ಇದ್ದಾನೆ. ಇನ್ನು ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್, ಜೆಡಿಎಸ್ ಕೂಡ ಜನರ ಧಾರ್ಮಿಕ ಭಾವನೆಗಳ ನಂಬಿಕೆಗೆ ಅರ್ಹವಾಗಿದೆ ಎಂದು ತಿಳಿಸಿದರು.