ಚೆನ್ನೈ, ಜ 15 (DaijiworldNews/HR): ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಪೊಂಗಲ್ ಹಬ್ಬದ ವಿಶೇಷವಾಗಿ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ವೇಳೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಕನಿಷ್ಠ 36 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಜಲ್ಲಿಕಟ್ಟು ವೇಳೆ ಗಾಯಗೊಂಡಿರುವ 36 ಮಂದಿಯಲ್ಲಿ ಆರು ಮಂದಿಯನ್ನು ಚಿಕಿತ್ಸೆಗಾಗಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇದಕ್ಕೂ ಮುನ್ನ ತಮಿಳುನಾಡಿನ ಪುದುಕೊಟ್ಟೈನಲ್ಲಿ 29 ಮಂದಿ ಗಾಯಗೊಂಡಿದ್ದರು.
ಇನ್ನು ಕಾರ್ಯಕ್ರಮಕ್ಕೆ 1,000 ಹೋರಿಗಳು ಮತ್ತು 600 ಪಳಗಿಸುವವರನ್ನು ನೋಂದಾಯಿಸಲಾಗಿದ್ದು, ಇದು ಸೋಮವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು ಮುಂದಿನ ಮೂರು ದಿನಗಳವರೆಗೆ ನಡೆಯಲಿದೆ.
ಸೂರ್ಯ ಪೊಂಗಲ್ ಆಚರಿಸುವ ಮಂಗಳಕರ ತಿಂಗಳ ಮೊದಲ ದಿನದಂದು, ಜಲ್ಲಿಕಟ್ಟು ಆಯೋಜಿಸಲಾಗುತ್ತದೆ.