ಪಣಜಿ, ಜ 15 (DaijiworldNews/HR): ತನ್ನ ನಾಲ್ಕು ವರ್ಷದ ಮಗನನ್ನು ಉಸಿರುಗಟ್ಟಿಸಿ ಹತ್ಯೆಗೈದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಎಐ ಸ್ಟಾರ್ಟ್ ಅಪ್ ಸಿಇಒ ಸುಚನಾ ಸೇಠ್ ಅವರ ಪೊಲೀಸ್ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಲಾಗಿದೆ.
ಸುಚನಾ ಸೇಠ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಗೋವಾ ನ್ಯಾಯಾಲಯ ತಿಳಿಸಿರುವ ಹಿನ್ನಲೆಯಲ್ಲಿ ಅವರ ಪೊಲೀಸ್ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಲಾಗಿದೆ.
ಇನ್ನು ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್ ಳನ್ನು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿದ್ದು, ಅಪರಾಧದ ಉದ್ದೇಶವನ್ನು ಕಂಡುಹಿಡಿಯಬೇಕಿದೆ ಮತ್ತು ಆಕೆಯ ಪರಿತ್ಯಕ್ತ ಪತಿ ವೆಂಕಟ್ ರಾಮನ್ ನೀಡಿದ ಹೇಳಿಕೆಯ ವಿವರಗಳೊಂದಿಗೆ ಅವಳ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜನವರಿ 8 ರಂದು ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದು ಬ್ಯಾಗ್ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಸೇಠ್ ನನ್ನು ಬಂಧಿಸಲಾಗಿತ್ತು.