ಮಧ್ಯಪ್ರದೇಶ ,ಜ 18 (DaijiworldNews/PC): ಕೋಚಿಂಗ್ ಸೆಂಟರೊಂದರಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ ಮೃತ ಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ನ ಕೋಚಿಂಗ್ ಸೆಂಟರ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ (18) ಮೃತಪಟ್ಟ ದುರ್ದೈವಿ.
ಮಧ್ಯಪ್ರದೇಶ ಲೋಕಸೇವಾ ಆಯೋಗದ MPPSC ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ಸಲುವಾಗಿ ಕೋಚಿಂಗ್ ಪಡೆಯುತ್ತಿರುವಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ.
ಘಟನೆಯ ವಿಡಿಯೋ ತರಗತಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ .