ಕಾರವಾರ, ಜ 20 (DaijiworldNews/PC):ದೇಶದ ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕು ಹೊರತು ದೇಶದ್ರೋಹಿಗಳ ವಿರೋಧ ಪಕ್ಷವಲ್ಲ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.
ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಜ 20 ರಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ಒಮ್ಮೆ ಗೆದ್ದರೆ ಸಾಕಾಗೋದಿಲ್ಲ ಬದಲಿಗೆ ಅಂತಿಮದ ತನಕ ನಾವೇ ಗೆಲ್ಲುತ್ತಿರಬೇಕು. ಅಂತಿಮ ಗೆಲುವು ಎಂದರೆ ನಮ್ಮ ಗೆಲುವು, ನಮ್ಮ ಗುರಿ ಹಿಂದೂರಾಷ್ಟ್ರ ಮುಂದೆ ಎಲ್ಲವೂ ಸರಿಹೋಗುತ್ತದೆ. ಜಾತಿ ಧರ್ಮ ಅದು ಇದು, ವ್ಯವಸ್ಥೆ ಸಹ ಸರಿ ಹೋಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ದೇಶದಲ್ಲಿ ಏನು ನಡೆಯುತ್ತಿದೆಯೋ ಅವೆಲ್ಲವೂ ಭಗವಂತನ ಇಚ್ಛೆ. ನಾವು ತೀರ್ಮಾನ ಮಾಡಿದ್ದೇನೂ ಇಲ್ಲ, ಜಗತ್ತಿಗೆ ಈಗ ಭಾರತ ಬೇಕು. ದೇಶಕ್ಕೆ ಬಿಜೆಪಿ ಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವು ಈ ದೇಶವನ್ನು ಮುಗಿಸಬೇಕು ಎಂಬ ಸಂಚು ನಡೆದಿತ್ತು ಎಂದು ಹೇಳಿದ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಕೊಲೆ ನಂತರ 15 ದಿವಸದ ನಂತರ ಜಹಂಗೀರ್ ಬಾಬ ಹತ್ಯೆಯಾಯಿತು. ಸಾರಾಬಾಯಿ ಕೊಲೆಯಾಯಿತು. ಇದ್ಯಾವುದೂ ಸಾವಲ್ಲ, ನನ್ನ ಶಬ್ಧದಲ್ಲಿ ಸ್ಪಷ್ಟತೆ ಇದೆ. ಇಂತಹ ಘಟನೆಗಳು ಸರಣಿ ಸರಣಿಯಲ್ಲಿ ನಮ್ಮ ದೇಶದಲ್ಲಿ ನಡೆದಿದೆ ಎಂದರು .