ಬೆಂಗಳೂರು, ಜ 21 (DaijiworldNews/HR): ರಾಮ ಮಂದಿರ ಲೋಕಾರ್ಪಣೆ ಕಾರ್ಯ ಕ್ರಮವನ್ನು ಕರ್ನಾಟಕದಲ್ಲಿರುವ 160 ಪಿವಿಆರ್ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜ.22ರಂದು ಸರಕಾರಿ ರಜೆ ಘೋಷಿಸುವಂತೆ ಈಗಾ ಗಲೇ ಮನವಿ ಮಾಡಿದ್ದೇವೆ. ಆ ದಿನ ಜನರು ಉತ್ತರಾಭಿ ಮುಖವಾಗಿ 5 ದೀಪ ಬೆಳಗ ಬೇಕು ಎಂದರು.
ಇನ್ನು ಇಂದಿನಿಂದ ಬಿಜೆಪಿಯು ರಾಜ್ಯಾದ್ಯಂತ “ಸೆಲ್ಫಿ ವಿತ್ ನನ್ನ ರಾಮ’ ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕಾಗಿ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.