ನವದೆಹಲಿ, 02 (DaijiworldNews/PC): ಯಾತ್ರೆಗಳ ಪ್ರಯತ್ನಕ್ಕೆ ಸಮಯವು ಸೂಕ್ತವಲ್ಲ ಎಂದು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದ ಬಗ್ಗೆ ಚುನಾವಣಾ ನಿಪುಣ ತಂತ್ರಜ್ಞ ಹಾಗೂ ಕಾರ್ಯಕರ್ತ ಪ್ರಶಾಂತ್ ಕಿಶೋರ್ ಅವರು ಟೀಕಿಸಿದ್ದಾರೆ.
ಖಾಸಗಿ ಮಾಧ್ಯಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಕೈಗೊಂಡಿರುವ ಯಾತ್ರೆಗೆ ಯಾವುದೇ ಲಾಜಿಕ್ ಇಲ್ಲ ಎಂದು ಹೇಳಿದ್ದಾರೆ.
ಯಾರು ಅವರಿಗೆ ಸಲಹೆ ನೀಡುತ್ತಿದ್ದಾರೆಂದು ನೋಡಿ. ನೀವು ಪ್ರಧಾನ ಕಚೇರಿಯನ್ನು ಬಿಟ್ಟು ಯಾತ್ರೆಗೆ ಹೋಗಲು ಇದು ಅತ್ಯಂತ ಕೆಟ್ಟ ಸಮಯವಾಗಿದೆ ಎಂದರು.
‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಸಾರ್ವತ್ರಿಕ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ನಡೆಯುವ ಸಾಧ್ಯತೆ ಇದೆ. ರಾಜಕೀಯ ನಡೆಯುವ ಸಮಯದಲ್ಲಿ ಪ್ರಧಾನವಾಗಿ ಇರಬೇಕಾದ ಸಂದರ್ಭವಿದು. ಆದರೆ, ಅವರು ಈಶಾನ್ಯದಲ್ಲಿ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಪ್ರದೇಶಗಳಿಗೆ ಭೇಟಿ ನೀಡುವುದು ಉತ್ತಮ. ಆದರೆ ಪ್ರಧಾನ ಕಛೇರಿಯನ್ನು ಬಿಡುವುದು ಖಂಡಿತವಾಗಿಯೂ ಬುದ್ಧಿವಂತ ಕ್ರಮವಲ್ಲ ಎಂದು ರಾಹುಲ್ ಗಾಂಧಿ ಕೈಗೊಂಡಿರುವ ಯಾತ್ರೆಯ ಬಗ್ಗೆ ಟೀಕೆ ವ್ಯಕ್ತ ಪಡಿಸಿದ್ದಾರೆ.