ಬೆಂಗಳೂರು ,02 (DaijiworldNews/PC): ಮಗನೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಹೆತ್ತ ತಾಯಿಯನ್ನೇ ಹತ್ಯೆ ಗೈದ ಘಟನೆ ಫೆ 2 ರಂದು ಬೆಂಗಳೂರಿನಲ್ಲಿ ನಡೆದಿದೆ.
ತಾಯಿ ನೇತ್ರಾ (40) ಘಟನೆಯಲ್ಲಿ ಮೃತರಾದವರು.
17 ವರ್ಷದ ಬಾಲಕ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದು ತನ್ನ ತಾಯಿಯ ತಲೆಗೆ ರಾಡ್ ನಿಂದ ಹೊಡೆದು ಹತ್ಯೆಗೈದು ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಮನೆಯಲ್ಲಿ ಇಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ತನ್ನ ತಾಯಿ ಸರಿಯಾದ ಆಹಾರವನ್ನು ನೀಡುತ್ತಿರಲಿಲ್ಲ, ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನು ತಿಳಿದ ತಾಯಿ ಗದರಿಸಿದ್ದು ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ತಾಯಿಯ ತಲೆಗೆ ಲೋಹದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.