ಚಿಕ್ಕಬಳ್ಳಾಪುರ: ಫೆ 03 (DaijiworldNews/PC): ಈ ಬಾರಿ ರಾಜ್ಯದ ಶಾಲೆಗಳಲ್ಲಿ ಎಪ್ರಿಲ್ ಮೇ ತಿಂಗಳ ಬೇಸಿಗೆ ರಜೆಯಲ್ಲಿಯೂ1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆಯಾಗಲಿದೆ.
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 31 ಜಿಲ್ಲೆಗಳ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬೇಸಗೆ ರಜೆ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟ ವಿತರಿಸಲು ನಿರ್ಧರಿಸಿದೆ.
ಒಟ್ಟು 41 ದಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ವಿತರಣೆಯಾಗಲಿದೆ.
ಈ ಬಗ್ಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯದ ಪಿಎಂ ಫೋಷಣ್ ಯೋಜನೆ ಅಭಿಯಾನದ ನಿರ್ದೇಶಕರು ಪಿಎಂ ಪೋಷಣ್ ವಿಭಾಗದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸಹಾಯಕ ನಿರ್ದೇಶಕರಿಗೆ ಸೂಕ್ತ ಮಾರ್ಗ ಸೂಚಿಗಳೊಂದಿಗೆ ಸೂಚನೆ ನೀಡಿದ್ದಾರೆ.