ವಿಜಯಪುರ, ಫೆ 04 (DaijiworldNews/HR): ರಾಷ್ಟ್ರ ಅಥವಾ ರಾಜ್ಯ ರಾಜಕಾರಣವಿದ್ದರೂ ಅಧಿಕಾರದ ಮೇಲೆ ರಾಜಕಾರಣ ಮಾಡಬಾರದು. ಬದಲಾಗಿ ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ತಿರುಗೇಟು ನೀಡಿದ್ದಾರೆ.
2024 ರಲ್ಲಿ ಬಿಜೆಪಿ ಅವರೇ ಅಧಿಕಾರಕ್ಕೆ ಬರುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಕಲಾಪದ ವೇಳೆ ನೀಡಿದ ಹೇಳಿಕೆಗೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಖರ್ಗೆ ಅವರ ಮಾತನ್ನು ಕೇಳಿದರೆ ಅವರೇ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬ ಅನುಮಾನವಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಯಾರೂ ಅಧಿಕಾರದ ಮೇಲೆ ರಾಜಕಾರಣ ಮಾಡಬಾರದು, ಯಾರ ಬಗ್ಗೆಯೂ ಯಾರೂ, ಯಾವ ರೀತಿಯಲ್ಲೂ ಹಗುರವಾಗಿ ಮಾತನಾಡಬಾರದು. ಎಲ್ಲರಿಗೂ ಅವರು ಬೆಳೆದು ಬಂದ ಸಿದ್ಧಾಂತ, ನಂಬಿಕೆ, ಆಚಾರ, ವಿಚಾರ ಎಲ್ಲಾ ಇರುತ್ತದೆ ಎಂದಿದ್ದಾರೆ.