ಧನಬಾದ್, ಫೆ 04 (DaijiworldNews/AK): ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ 'ಜಲ, ಅರಣ್ಯ, ಭೂಮಿ' ಪರವಾಗಿ ನಿಂತಿದೆ ಎಂದು ಕಾಂ ಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಾರ್ಖಂಡ್ನ ಧನಬಾದ್ ಜಿಲ್ಲೆಯಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ರಾಹುಲ್ ಪ್ರತಿಕ್ರಿಯಿಸಿ, ಸಾರ್ವ ಜನಿಕ ವಲಯವನ್ನು ಖಾಸಗಿಯವರಿಗೆ ಮಾರಾಟಮಾಡದಂತೆ ತಡೆಯುವುದು ಮತ್ತು ದೇಶದ ಬುಡಕಟ್ಟು ಜನರಿಗೆ ನ್ಯಾಯವನ್ನು ಒದಗಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ ಜಲ, ಅರಣ್ಯ, ಭೂಮಿಯ ಪರವಾಗಿ ನಿಂತಿದೆ.ಯುವಜನತೆಗೆ ಶಿಕ್ಷಣ ಹಾಗೂ ಉದ್ಯೋ ಗ ನೀಡಲು ಯತ್ನಿಸಲಾಗಿದೆ.ಆದರೆ ಆರ್ಥಿಕ ಹಿಂಜರಿತ, ನೋಟು ಅಮಾನ್ಯೀಕರಣ, ಜಿಎಸ್ಟಿ ಮತ್ತು ನಿರುದ್ಯೋಗವು ದೇಶದ ಯುವಜನತೆಯ ಭವಿಷ್ಯವನ್ನು ಹಾಳು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದರು.
ಜಾರ್ಖಂಡ್ನಲ್ಲಿ ಯಾತ್ರೆಯ ಮೂರನೇ ದಿನವಾದ ಭಾನುವಾರ ಧನಬಾದ್ ನಗರದ ಗೋವಿಂದಪುರದಿಂದ ಯಾತ್ರೆ ಮುಂದುವರಿದಿದೆ.