ಮುಂಡಗೋಡ, ಫೆ 04 (DaijiworldNews/HR): 2011ರಲ್ಲಿ ಮುಂಡಗೋಡ ಪೊಲೀಸ್ ಅಧಿಕಾರಿಗಳ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿನ ವಿಚಾರಣೆಗೆ ಕಳೆದ ಆರು ತಿಂಗಳಿಮದ ಹಾಜರಾಗದ ಹಿನ್ನಲೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2011ರಲ್ಲಿ ಬಾಪುಗೌಡ ಪಾಟೀಲ ಅವರು ಪೊಲೀಸರು ತಮ್ಮ ಮೂಬೈಲ್ ಕರೆ ಸ್ವಿಕಾರ ಮಾಡಿಲ್ಲ ಎಂಬ ಉದ್ದೇಶದಿಂದ ಮುಂಡಗೋಡ ಪೊಲೀಸ್ ಠಾಣೆಯ ಆಗಿನ ಎಎಸ್ಐ ಆಗಿದ್ದ ಬಾಲಕೃಷ್ಣ ಪಾಲೇಕರ ಅವರನ್ನು ಮುಂಡಗೋಡ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಿಂದಿಸಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಬಾಪುಗೌಡ ಸೇರಿ ಹದಿನೈದು ಜನ ಆರೋಪಿಗಳ ಮೇಲೆ ಪ್ರಕರಣ ದಾಖಖಲಾಗಿತ್ತು.
ಇನ್ನು ಆರೋಪಿತರ ಪೈಕಿ ಹದಿನಾಲ್ಕು ಜನರು ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದರು ಬಾಪುಗೌಡ ಪಾಟೀಲ ಮಾತ್ರ ಕಳೆದ ಆರು ತಿಂಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಗೈರು ಆಗಿದ್ದರು. ಇದೀಗ ಪೊಲೀಸರು ಬಾಪುಗೌಡ ಪಾಟೀಲ ಅವರನ್ನು ಬೆಂಗಳೂರನಿಂದ ದಸ್ತಗಿರಿ ಮಾಡಿ ಕರೆ ತಂದು ಶನಿವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರ ಪಡಿಸಿದ್ದಾರೆ.