ಚೆನ್ನೈ, ಫೆ 04 (DaijiworldNews/AA): ತಮಿಳುನಾಡಿನ ರಾಮೇಶ್ವರಂನ ಕರಾವಳಿ ಭಾಗದಲ್ಲಿ ಗಡಿ ಉಲ್ಲಂಘಿಸಿದ 23 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಭಾರತೀಯ ಮೀನುಗಾರರು, ಪಾಲ್ ಕ್ ಬೇ ಸಮುದ್ರ ಪ್ರದೇಶದ ಡೆಲ್ಫ್ಟ್ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿದ್ದು, ನಂತರ ಜಾಫ್ನಾದ ಮೈಲಾಟಿ ನೇವಲ್ ಕ್ಯಾಂಪ್ ಗೆ ತನಿಖೆಗಾಗಿ ಕರೆದೊಯ್ದಿದೆ ಎಂದು ರಾಮೇಶ್ವರಂ ಮೀನುಗಾರರ ಸಂಘ ಮಾಹಿತಿ ನೀಡಿದೆ.
ಇನ್ನು ಕಳೆದ ತಿಂಗಳು 18 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಶ್ರೀಲಂಕಾದ ಕರಾವಳಿ ಪ್ರದೇಶದಲ್ಲಿ 2 ಭಾರತೀಯ ಮೀನುಗಾರಿಕಾ ಬೋಟ್ ಗಳನ್ನು ವಶಕ್ಕೆ ಪಡೆದಿತ್ತು.