ನವದೆಹಲಿ, ಫೆ 5(DaijiworldNews/SK): ಇನ್ನೇನು ಕೆಲ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಯಾವುದೇ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು’ ಎಂದು ಸೋಮವಾರ ಭಾರತೀಯ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಸಲಹೆ ನೀಡಿರುವ ಭಾರತೀಯ ಚುನಾವಣಾ ಆಯೋಗವು, ‘ಪೋಸ್ಟರ್ಗಳು ಮತ್ತು ಕರಪತ್ರಗಳ ವಿತರಣೆ ಹಾಗೂ ಘೋಷಣೆ ಕೂಗುವುದು, ವಾಹನದಲ್ಲಿ ಅಥವಾ ರ್ಯಾಲಿಗಳಲ್ಲಿ ಕರೆದೊಯ್ಯುವುದು ಸೇರಿದಂತೆ ಇತರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು’ ಎಂದು ನಿರ್ದೇಶನ ನೀಡಿದೆ.
ಇನ್ನು ‘ಚುನಾವಣೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಯಾವುದೇ ವಯಸ್ಸಿನ ಮಕ್ಕಳನ್ನು ಸೇರಿಸಿಕೊಳ್ಳಬಾರದು’ ಎಂದು ಆಯೋಗವು ಪ್ರತ್ಯೇಕವಾಗಿ ಎಲ್ಲ ಚುನಾವಣಾ ಅಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.