ಬೆಂಗಳೂರು, ಫೆ 07 (DaijiworldNews/AK):ಕೆಪಿಎಸ್ಸಿ ಅಧ್ಯಕ್ಷ, ಕೆಲ ಸದಸ್ಯರು ಹಾಗೂ ಕೆಪಿಎಸ್ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರ ನಡುವೆ ನಡೆಯುತ್ತಿರುವ ಕಿತ್ತಾಟ ನಡೆಯುತ್ತಿರುವ ಬೆನ್ನಲೆ ಇದೀಗ ಸರ್ಕಾರ ಲತಾ ಕುಮಾರಿ ಅವರಿಗೆ ೧೦ ದಿನ ಗಳಿಕೆ ರಜೆ ಮಂಜೂರು ಮಾಡಿದೆ. ಈ ಕುರಿತು ಡಿಪಿಎಆರ್ ಇಲಾಖೆ ಇಂದು ಆದೇಶ ಹೊರಡಿಸಿದೆ.
ಕೆ.ಎಸ್. ಲತಾ ಕುಮಾರಿ ಅವರಿಗೆ ಫೆ. 7 ರಿಂದ 17ರವರೆಗೆ ಗಳಿಕೆ ರಜೆ ನೀಡಲಾಗಿದೆ. ಅವರ ರಜೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್ಸಿ ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿ ಆದೇಶಿಸಿದೆ.
ಕೆಪಿಎಸ್ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಕೆಲ ಸದಸ್ಯರು ಮತ್ತು ಲತಾಕುಮಾರಿಅವರ ನಡುವೆ ಜಟಾಪಟಿ ನಡೆಯುತ್ತಿದೆ ತಿಳಿದು ಬಂದಿದೆ. ಇದರ ನಡುವೆ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಕೂತುಹಲ ಮೂಡಿಸಿದೆ.
ಈಗಾಗಲೇ ಆಯೋಗದ ಆಯ್ಕೆ ಸಮಿತಿ ಸೂಚಿಸಿದ್ದ ಅಭ್ಯರ್ಥಿ ಯನ್ನು ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಬೇಕು. ಇಲ್ಲದಿದ್ದಾರೆ ರಜೆ ಮೇಲೆ ತೆರಳಬೇಕು ಎಂದು ಕಾರ್ಯ ದರ್ಶಿ ಕೆ.ಎಸ್. ಲತಾಕುಮಾರಿ ಅವರ ಮೇ ಲೆ ಒತ್ತಡವಿತ್ತು ಎನ್ನಲಾಗುತ್ತಿದೆ.