ಬೆಂಗಳೂರು, ಫೆ 09 (DaijiworldNews/MS): ರಾಜ್ಯದ ಜನರಿಗೆ ಉಚಿತವಾಗಿ ನೀಡುವ ಸಲುವಾಗಿ 34 ರೂಪಾಯಿಗಳ ಖರೀದಿಗೆ ಕೇಳಿದರೂ ಅಕ್ಕಿ ಕೊಡದ ಕೇಂದ್ರ ಸರ್ಕಾರ ಪಡಿತರ ಹಂಚಿಕೆಗೆ ಇಟ್ಟಿದ್ದ ಅಕ್ಕಿಯನ್ನು ಕೆಜಿಗೆ 29ರೂ. ನಂತೆ ಮಾರಾಟಕ್ಕಿಟ್ಟಿದೆ ಎಂದು ಕಾಂಗ್ರೆಸ್ , ಕೇಂದ್ರ ಸರ್ಕಾರದ "ಭಾರತ್ ಬ್ರ್ಯಾಂಡ್ "ನ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , "ಹಿಂದೆ ಇಂದಿರಾ ಗಾಂಧಿಯವರ ಸರ್ಕಾರ ದೇಶದ ಜನಕ್ಕೆ ಉಚಿತವಾಗಿ ಗೋದಿಯನ್ನು ನೀಡಿತ್ತು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ತಲಾ 10 ಕೆಜಿ ಅಕ್ಕಿ ನೀಡಿತ್ತು.ಆದರೆ ಈಗ ಜನರ ಪಾಲಿನ ಅಕ್ಕಿಯನ್ನು ಕೇಂದ್ರ ಸರ್ಕಾರ ಮಾರಾಟಕ್ಕೆ ಮುಂದಾಗಿದೆ,
ದೇಶದ ಸಾರ್ವಜನಿಕ ಸಂಸ್ಥೆಗಳು ಉದ್ಯಮಿಗಳಿಗೆ ಮಾರಾಟ, ಪಡಿತರ ಅಕ್ಕಿ ಜನತೆಗೆ ಮಾರಾಟ ಎಂದು ವ್ಯಂಗ್ಯವಾಡಿದೆ.
ಮೋದಿಯವರದ್ದು ಮಾರುವ ಸರ್ಕಾರ ಹೊರತು ಉದ್ದಾರ ಮಾಡುವ ಸರ್ಕಾರವಲ್ಲ ಎಂದು ಕಿಡಿಕಾರಿದೆ.