ನವದೆಹಲಿ, ಫೆ 09 (DaijiworldNews/ AK): ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಮತ್ತು ಇಬ್ಬರು ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ಗೆ ರೋಸ್ ಅವೆನ್ಯೂ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್ ಶೀಟ್ನ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಸಮನ್ಸ್ ನೀಡಿತ್ತು. ಮುಂದಿನ ವಿಚಾರಣೆಯನ್ನು ಫೆ. 28ಕ್ಕೆ ಮುಂದೂಡಿದೆ.
ಪಿಎಂಎಲ್ಎ ನ್ಯಾಯಾಲಯವು ಈ ಹಿಂದೆ ಅಮಿತ್ ಕಟ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್ ಮತ್ತು ಹೃದಯಾನಂದ್ ಚೌಧರಿ ವಿರುದ್ಧ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.
ರಾಬ್ರಿ ದೇವಿ, ಮಿಸಾ ಭಾರತಿ, ಹೇಮಾ ಯಾದವ್ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಹಾಜರಾಗಿದ್ದರು, ಅಮಿತ್ ಕತ್ಯಾಲ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು.
ಕಳೆದ ಜ. 1ರಂದು ಅಮಿತ್ ಕತ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಎರಡು ಕಂಪನಿಗಳ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ , 2002 ರ ನಿಬಂಧನೆಗಳ ಅಡಿಯಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು.