ನವದೆಹಲಿ, ಫೆ 10 (DaijiworldNews/HR): ಮರ್ಯಾದಾ ಪುರುಷೋತ್ತಮ ರಾಮನನ್ನು ನಾನು ಗೌರವಿಸುತ್ತೇನೆ. ಆದರೆ ನಾಥೂರಾಂ ಗೋಡ್ಸೆಯನ್ನು ದ್ವೇಷಿಸುತ್ತೇನೆ. ಯಾಕೆಂದರೆ ಕೊನೆಯ ಬಾರಿ ಹೇ ರಾಮ್ ಎಂದ ವ್ಯಕ್ತಿಯನ್ನು ಆತ ಕೊಂದಿದ್ದಾನೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾ ಕುರಿತ ಚರ್ಚೆಯ ಸಂದರ್ಭದಲ್ಲಿ ಓವೈಸಿ ಮಾತನಾಡಿದ ಅವರು, ರಾಮನನ್ನು ನಾನು ಗೌರವಿಸುತ್ತೇನೆ, ಆದರೆ ನನ್ನ ಜನರು ನಾಥೂರಾಂ ಗೋಡ್ಸೆಯನ್ನು ದ್ವೇಷಿಸುತ್ತಲೇ ಇರುತ್ತಾರೆ. ಮೋದಿ ಸರ್ಕಾರ ಒಂದು ಸಮುದಾಯದ ಸರ್ಕಾರವೇ ಅಥವಾ ಒಂದು ಧರ್ಮದ ಸರ್ಕಾರವೇ ಅಥವಾ ದೇಶದ ಎಲ್ಲಾ ಧರ್ಮಗಳನ್ನು ಅನುಸರಿಸುವ ಜನರ ಸರ್ಕಾರವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಸರ್ಕಾರಕ್ಕೆ ಯಾವುದಾದರೂ ಧರ್ಮವಿದೆಯೇ? ಈ ದೇಶದಲ್ಲಿ ಯಾವುದೇ ಧರ್ಮವಿಲ್ಲ ಎಂದು ನಾನು ನಂಬುತ್ತೇನೆ. ಜನವರಿ 22 ರ ಸಂದೇಶವನ್ನು ನೀಡುವ ಮೂಲಕ ಈ ಸರ್ಕಾರವು ಒಂದು ಧರ್ಮವು ಇನ್ನೊಂದು ಧರ್ಮದ ಅನುಯಾಯಿಗಳನ್ನು ಗೆದ್ದಿದೆ ಎಂದು ತೋರಿಸಲು ಬಯಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.