ನವದೆಹಲಿ, ಫೆ 10(DaijiworldNews/SK): ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ದ ಕನಸು ನನಸಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಮುಂಬರುವ 25 ವರ್ಷಗಳು ನಮಗೆ ಅತ್ಯಂತ ಪ್ರಮುಖವಾದದ್ದು, ರಾಜಕೀಯವನ್ನು ಒಂದೆಡೆ ಇರಿಸಿ, ನಮ್ಮ ರಾಷ್ಟ್ರದ ಆಶಯಗಳು ಈಡೇರಿಸುವ ಉದ್ದೇಶದಿಂದ ಕೆಲಸ ಮಾಡಿ ವಿಕಸಿತ ಭಾರತ’ದ ಕನಸು ನನಸಾಗಿಸಬೇಕು ಎಂದರು.
ಇನ್ನು ಲೋಕಸಭೆ ಚುನಾವಣೆ ಬಹಳ ದೂರವಿಲ್ಲ. ಕೆಲವರು ಆತಂಕಕ್ಕೊಳಗಾಗಬಹುದು. ಆದರೆ ಇದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶವಾಗಿದೆ. ನಾವೆಲ್ಲರೂ ಇದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ. ನಮ್ಮ ಚುನಾವಣೆಗಳು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತವೆ. ಪ್ರಜಾಪ್ರಭುತ್ವ ಸಂಪ್ರದಾಯವನ್ನು ಅನುಸರಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.