ನವದೆಹಲಿ, ಫೆ 12 (DaijiworldNews/PC): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಕೂಡ ಇರಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ.
ಪ್ರಧಾನಿ ಮೋದಿ ಎರಡೂ ದೇಶಗಳಲ್ಲಿ ಯುಪಿಐ ಜೊತೆಗೆ ರುಪೇ ಕಾರ್ಡ್ ಸೇವೆಗಳನ್ನು ಪ್ರಾರಂಭಿಸಲಿದ್ದು, ಈ ಕಾರ್ಯಕ್ರಮವು ಇಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.
ಶ್ರೀಲಂಕಾ ಮತ್ತು ಮಾರಿಷಸ್ ನೊಂದಿಗೆ ಭಾರತದ ಬಲವಾದ ಸಾಂಸ್ಕೃತಿಕ ಹಾಗೂ ಉತ್ತಮ ಬಾಂಧವ್ಯವನ್ನು ಹೊಂದಿರುವುದರಿಂದ ಈ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಭಾರತದಿಂದ ಶ್ರೀಲಂಕಾ ಮತ್ತು ಮಾರಿಷಸ್ ಗೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಮತ್ತುಈ ಎರಡು ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಡಿಜಿಟಲ್ ವಹಿವಾಟಿಗೆ ಅನುಕೂಲವಾಗಲಿದೆ.