ಫೆ 12 (DaijiworldNews/PC): ಎಲ್ಲರ ಸಾಧನೆಯ ಹಿಂದೆಯೂ ಒಂದೊಂದು ಕಧೆ ಇದ್ದೇ ಇರುತ್ತದೆ ಒಬ್ಬರು ಸಾಧನೆಯನ್ನು ಮಾಡುವ ಸಮಯದಲ್ಲಿ ವಿವಿಧ ಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತದೆ ಆದರೆ ಇಲ್ಲೊಬ್ಬರು UPSC ಪರೀಕ್ಷೆಯನ್ನು ಎದುರಿಸಲು ಮಾಡಲಿಂಗ್ ಕ್ಷೇತ್ರವನ್ನೇ ತೊರೆದ ಮಿಸ್ ಇಂಡಿಯಾ ಫೈನಲಿಸ್ಟ್ ಒಬ್ಬರ ಸಾಧನೆಯ ಯಶೋಗಾಥೆಯನ್ನು ತಿಳಿಯೋಣ.
ರಾಜಸ್ಥಾನಕ್ಕೆ ಸೇರಿದ ಐಶ್ವರ್ಯಾ ಅವರು ಕರೀಂ ನಗರದ 9 ನೇ ತೆಲಂಗಾಣ ಎನ್ಸಿಸಿ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಅವರ ಪುತ್ರಿ. ಅವರ ಕುಟುಂಬವು ಮಿಲಿಟರಿ ಹಿನ್ನೆಲೆಯನ್ನು ಕಂಡಿದ್ದು ಇದು ಅವರನ್ನು ದೇಶ ಸೇವೆಗೆ ಪ್ರೇರೇಪಿಸುವಂತೆ ಮಾಡಿತು.
ಚಾಣಕ್ಯ ಪುರಿಯಲ್ಲಿರುವ ಸಂಸ್ಕೃತಿ ಶಾಲೆಯಲ್ಲಿ ಅವರು ಶಾಲಾ ಶಿಕ್ಷಣವನ್ನು ಮುಗಿಸಿ ಬಳಿಕ ಅವರು 12 ನೇ ತರಗತಿ ಬೋರ್ಡ್ನಲ್ಲಿ 97.5 ಶೇಕಡಾವನ್ನು ಪಡೆದು ಬಳಿಕ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಪದವಿ ಪಡೆದರು.
ಪದವಿಯ ಸಮಯದಲ್ಲಿ, ಅವರು ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡರು 2014 ರಲ್ಲಿ ಅವರು ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡರು ಅಷ್ಟೇ ಅಲ್ಲದೇ 2015 ರಲ್ಲಿ ಅವರು ಮಿಸ್ ದೆಹಲಿ ಕಿರೀಟವನ್ನು ಪಡೆದರು, 2016 ರಲ್ಲಿ, ಅವರು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದರು.
2018 ರಲ್ಲಿ, ಅವರು IIM ಇಂದೋರ್ಗೆ ಆಯ್ಕೆಯಾದರು ಆದರೆ ಅವರು ಅದರ ಪ್ರವೇಶವನ್ನು ತೆಗೆದುಕೊಳ್ಳಲಿಲ್ಲ ಬದಲಿಗೆ ಜನರ ಸೇವೆಗಾಗಿ ಐಎಎಸ್ ಅಧಿಕಾರಿಯಾಗಲು ಮಾಡೆಲಿಂಗ್ನ ಪ್ರಪಂಚದಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಂಡರು.
ತನ್ನ ಅವಿರತ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಹಾಗೂ ಮನೆಯಲ್ಲಿ 10 ತಿಂಗಳುಗಳ ಕಾಲ ಸ್ವಯಂ ಅಧ್ಯಯನದ ಮೂಲಕ ಅವರು ತನ್ನ ಮೊದಲ ಪ್ರಯತ್ನದಲ್ಲಿಯೇ UPSC ಯಲ್ಲಿ ಪ್ರಭಾವಶಾಲಿ 93 ನೇ ರ್ಯಾಂಕ್ ಗಳಿಸಿದರು.