ನವದೆಹಲಿ, ಫೆ 13 (DaijiworldNews/HR): ದೆಹಲಿಯಲ್ಲಿ ಇಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನೆಗೆ ಮುಂದಾಗಿರುವ ರೈತರನ್ನು ಜೈಲಿಗೆ ಹಾಕುವುದು ತಪ್ಪು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಹೇಳಿದ್ದಾರೆ.
ಇಂದು ಪಂಜಾಬ್, ಹರ್ಯಾಣದಿಂದ ರಾಜಧಾನಿ ದೆಹಲಿಯತ್ತ ಸಾವಿರಾರು ಮಂದಿ ರೈತರು ದೆಹಲಿ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ಆಗಮಿಸುತ್ತಿದ್ದು, ದೆಹಲಿಯ ಬವಾನಾ ಸ್ಟೇಡಿಯಂ ಅನ್ನು ಜೈಲನ್ನಾಗಿ ಪರಿವರ್ತಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಆಪ್ ಸರ್ಕಾರ ತಳ್ಳಿಹಾಕಿದ ನಂತರ ಕೇಜ್ರಿವಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸೋಮವಾರ ಕೇಂದ್ರ ಸರ್ಕಾರ, ಫೆ,13ರಂದು ರೈತರ ದೆಹಲಿ ಚಲೋ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಬವಾನಾ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಜೈಲನ್ನಾಗಿ ಪರಿವರ್ತಿಸಬೇಕೆಂದು ಕೋರಿ ಪತ್ರ ಬರೆದಿತ್ತು.