ಬೆಂಗಳೂರು, ಫೆ 13 (DaijiworldNews/AA): ರಾಜ್ಯ ಸರ್ಕಾರ ಗುತ್ತಿಗೆದಾರರರಿಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದೀಗ ಇದರ ಬೆನ್ನಲ್ಲೇ ಗುತ್ತಿಗೆ ಸಂಘದ ಅಧ್ಯಕ್ಷ ಕೆಂಪಣ್ಣ ತಮ್ಮ 40% ಕಮೀಷನ್ ಆರೋಪದಿಂದ ಉಲ್ಟಾ ಹೊಡೆದಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಾಕಿ ಇದ್ದ ಎಲ್ಲಾ ಬಿಲ್ ಕ್ಲಿಯರ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆವು. ಹಿಂದಿನ ಅವಧಿಯಲ್ಲಿ ನಮಗೆ ಅಷ್ಟೊಂದು ಸ್ಪಂದನೆ ದೊರೆತಿರಲಿಲ್ಲ. ಆದರೆ ಈ ಬಾರಿ ಬಾಕಿ ಬಿಲ್ ಕ್ಲಿಯರ್ ಮಾಡುವ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ನಮ್ಮ ಪದಾಧಿಕಾರಿಗಳು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರ 1054 ಮಂದಿ ಸಣ್ಣ ಗುತ್ತಿಗೆದಾರರಿಗೆ ಪೂರ್ತಿ ಬಿಲ್ ಕ್ಲಿಯರ್ ಮಾಡಿದೆ. ಒಂದು ಕೋಟಿ ಗುತ್ತಿಗೆದಾರರಿಗೆ ಬಿಲ್ ಕ್ಲೀಯರ್ ಮಾಡಿದೆ. ಆದರೆ ಪ್ಯಾಕೇಜ್ ಗುತ್ತಿಗೆ ಪದ್ಧತಿ ರದ್ದಾಗಬೇಕು ಎಂಬ ನಮ್ಮ ನಿಲುವು ಈಗಲೂ ಮುಂದುವರೆದಿದೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಈಗ ಪರ್ಸಂಟೇಜ್ ಕಡಿಮೆ ಆಗಿದೆ. ಆದರೆ ಎಷ್ಟಾಗಿದೆ ತಿಳಿದಿಲ್ಲ. ಒಂದೊಂದೇ ಬಿಲ್ ಕ್ಲೀಯರ್ ಆಗುತ್ತಿದೆ. ಬಿಬಿಎಂಪಿಯದ್ದೂ ಬಿಲ್ ಕ್ಲಿಯರ್ ಆಗುತ್ತಿದೆ. ಹಣ ಬಿಡುಗಡೆ ಮಾಡಿದ ಸಿಎಂ, ಡಿಸಿಎಂಗೆ ನಮ್ಮ ನೋವು ಆಲಿಸಿದ್ದಕ್ಕೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.