ಶ್ರೀ ಹರಿಕೋಟಾ,ಫೆ 17(DaijiworldNews/AK): ಜಿಯೋಸಿಂಕ್ರೋ ನಸ್ ಲಾಂಚ್ ವೆಹಿಕಲ್ F14 (GSLV-F14) ನಲ್ಲಿ ಇಸ್ರೋ ದ INSAT3DS ಹವಾಮಾನ ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಈ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿ “GSLV-F14 INSAT-3DS ಮಿಷನ್ ಯಶಸ್ವಿ ಉಡಾವಣೆ ಸಾಧನೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಉತ್ತಮವಾಗಿ ಕಕ್ಷೆಗೆ ತಲುಪಿಸಲಾಗಿದೆ. ವಾಹನವು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ನಾವು ಗಮನಿಸಿದ್ದೇವೆ ಎಂದು ತಂಡದವರಿಗೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಭಾರತದ ಭೂ ವಿಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆದಿರುವ INSAT-3DS ಉಪಗ್ರಹವನ್ನು “ಹವಾಮಾನ ಮುನ್ಸೂಚನೆ, ವಿಪತ್ತು ಎಚ್ಚರಿಕೆಗಾಗಿ ವರ್ಧಿತ ಹವಾಮಾನ ವೀಕ್ಷಣೆ, ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆಗಾಗಿ ವಿನ್ಯಾಸಗೊಳಿಸಲಾಗಿದೆ.