ಮುಂಬೈ, ಫೆ 19 (DaijiworldNews/MS): ಮಹಾರಾಷ್ಟ್ರದ ನಂದಗಾಂವ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕ್ರಿಕೆಟಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂಡದ ಇತರ ಐವರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ನಡೆದಿದೆ.
ನಂದಗಾಂವ್ ಖಂಡೇಶ್ವರ ತಾಲೂಕಿನ ಶಿಂಗನಾಪುರ ಬಳಿ ಭಾನುವಾರ ಬೆಳಗ್ಗೆ ಕಾಂಕ್ರೀಟ್ ಮಿಕ್ಸರ್ ಟ್ರಕ್ಗೆ ಮಿನಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕ್ರಿಕೆಟಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟೆನಿಸ್-ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಕ್ರಿಕೆಟಿಗರು ಯವತ್ಮಾಲ್ಗೆ ತೆರಳುತ್ತಿದ್ದರು. ಅವರು ಅಮರಾವತಿಯಲ್ಲಿ ಬಸ್ ಹತ್ತಿದ್ದರು. ಘಟನೆಯಲ್ಲಿ ಕ್ರಿಕೆಟ್ ಆಟಗಾರಾದ ಶ್ರೀಹರಿ ರಾವುತ್, ಜ್ಯೂಷ್ ಬಹಲೆ, ಸುಯಶ್ ಅಂಬಾರ್ಟೆ ಮತ್ತು ಸಂದೇಶ್ ಪದಾರ್ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಶಿವನಗಾಂವ್ನ ಬಳಿ ತಲುಪಿದಾಗ, ಬಸ್ ಕಾಂಕ್ರೀಟ್ ಮಿಕ್ಸರ್ ಟ್ರಕ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.