ಬೆಂಗಳೂರು,ಫೆ 20 (DaijiworldNews/ AK): 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PUC Exam) ಮಾರ್ಚ್ 1 ರಿಂದ 22ರ ವರೆಗೆ ನಡೆಯಲಿವೆ.ಎಸ್ಎಸ್ಎಲ್ಸಿ ಪರೀಕ್ಷೆಗಳು (SSLC Exam) ಮಾರ್ಚ್ 25 ರಿಂದ ಏಪ್ರಿಲ್ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಕಾಸಸೌಧದಲ್ಲಿ ಪೂರ್ವಭಾವಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವರ್ಷ 8,96,271 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೂರೂ ಪರೀಕ್ಷೆಯಲ್ಲಿನ ಗರಿಷ್ಠ ಅಂಕ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಹಾಗಂತ ಮೂರೂ ಪರೀಕ್ಷೆ ಬರೆಯವುದು ಕಡ್ಡಾಯವಲ್ಲ. ಯಾವ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಾರೆ ಅದನ್ನು ಮಾತ್ರ ಪರಿಗಣನೆ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್ ಎಸ್ಎಲ್ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.
ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತೆ. ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ವಿಚಾರ ನಿರ್ಧರಿಸಲಾಗುತ್ತದೆ ಎಂದು ಹೇಳಿದರು