ಬೆಂಗಳೂರು, ಫೆ 22 (DaijiworldNews/HR): ಕೇಂದ್ರ ಸರ್ಕಾರವು ಎಲ್ಲರಿಗೂ ಸಹಕಾರವಾಗುವಂತೆ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದೆ. ಆದರೆ ಆರಂಭಿಕ ದಿನಗಳಲ್ಲೆ ಅಕ್ಕಿ ಸಿಗದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಫೆಬ್ರುವರಿ 6ರಂದು ಮೊಬೈಲ್ ವ್ಯಾನ್ಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಭಾರತ್ ಬ್ರ್ಯಾಂಡ್ ಗೆ ಚಾಲನೆ ನೀಡಿತ್ತು. ಕೆಜಿಗೆ 29 ರೂಪಾಯಿಯಂತೆ ಒಬ್ಬ ವ್ಯಕ್ತಿ10 ಕೆಜಿ ಅಕ್ಕಿ ಪಡೆಯಬಹುದಿತ್ತು. ಆದರೆ ಇನ್ನೂ ಕೂಡ ಭಾರತ್ ಅಕ್ಕಿ ಸಿಗುತ್ತಿಲ್ಲ. ಇದೆಲ್ಲ ಚುನಾವಣೆ ಗಿಮಿಕ್ ಎಂದು ಸಾರ್ವಜನಿಕರು ಕೇಂದ್ರ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಅಕ್ಕಿ ಖರೀದಿಗೆ ಯಾವುದೇ ಆಧಾರ ಕಾರ್ಡ್, ಬಿಪಿಎಲ್, ಎಪಿಎಲ್ ಕಾರ್ಡ್ ನ ಅವಶ್ಯಕತೆ ಇರುವುದಿಲ್ಲ ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡುವ ಮೂಲಕ ಅಕ್ಕಿ ಖರೀದಿಸಬಹುದಾಗಿತ್ತು.
ರಿಲಯನ್ಸ್, ಫ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್ ಸೇರಿದಂತೆ ಆನ್ಲೈನ್ನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದಿತ್ತು. ಆದರೆ ಸಧ್ಯ ಎಲ್ಲೂ ಅಕ್ಕಿ ಸಿಗುತ್ತಿಲ್ಲ.