ರಾಜಸ್ಥಾನ, ಫೆ 22(DaijiworldNews/AA): ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯನ್ನು ಆರಂಭಿಕ ಪ್ರಯತ್ನದಲ್ಲೇ ತೇರ್ಗಡೆ ಹೊಂದುವುದು ಕಷ್ಟಸಾಧ್ಯ. ಹೀಗೆ ತನ್ನ ಆರಂಭಿಕ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಐಎಎಸ್ ಅಧಿಕಾರಿ ಸೋನಿಯಾ ಮೀನಾ ಅವರ ಯಶೋಗಾಥೆ ಇದು.
ಸೋನಿಯಾ ಮೀನಾ ಅವರು ಮೂಲತಃ ರಾಜಸ್ಥಾನದವರು. ಅವರು ತಮ್ಮ ಊರಿನ ಸ್ಥಳೀಯ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸುತ್ತಾರೆ. 2013 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಸೋನಿಯಾ ಅವರು ತಮ್ಮ ಆರಂಭಿಕ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತರೆ. ಜೊತೆಗೆ 36ನೇ ಅಖಿಲ ಭಾರತ ರ್ಯಾಂಕ್ ಅನ್ನು ಕೂಡ ಗಳಿಸುತ್ತಾರೆ.
ಸೋನಿಯಾ ಅವರು ಕಳೆದ 10 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಾ ಅಲ್ಲೇ ನೆಲೆಸಿರುತ್ತಾರೆ. ತಮ್ಮ ಕರ್ತವ್ಯ ನಿಷ್ಠೆ ಹಾಗೂ ಕಾರ್ಯ ವೈಖರಿಯಿಂದಲೇ ಹೆಸರುವಾಸಿಯಾಗಿರುವ ಸೋನಿಯಾ ಅವರು ಮಾಫಿಯಾ ಅರ್ಜುನ್ ಸಿಂಗ್ ನ ಕೂಲಂಕುಶ ತನಿಖೆ ನಡೆಸಿರುತ್ತಾರೆ. ಆದ್ದರಿಂದಲೇ ಮಾಫಿಯಾ ಜಗತ್ತಿಗೆ ಸೋನಿಯಾ ಅವರು ಸಿಂಹಸ್ವಪ್ನವಾಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 17.9 ಸಾವಿರಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಸೋನಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅವರು ಸದಾ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪರೀಕ್ಷೆ ಕುರಿತು ಸಲಹೆಗಳನ್ನು ನೀಡುತ್ತಲೇ ಇರುತ್ತಾರೆ.
ಪ್ರಸ್ತುತ ಮಹಾರಾಷ್ಟ್ರದ ಭೋಪಾಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸೋನಿಯಾ ಅವರು, ಎಸ್ಡಿಎಂ, ಎಡಿಎಂ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆಲಸ ಮಾಡಿದ್ದಾರೆ. ಸೋನಿಯಾ ಅವರು ಛತ್ತರ್ಪುರದ ರಾಜನಗರ ಜಿಲ್ಲೆಯಲ್ಲಿ ಎಸ್ಡಿಎಂ ಆಗಿ, ಉಮಾರಿಯಾದಲ್ಲಿ ಜಿಲ್ಲಾ ಪಂಚಾಯತ್ನ ಎಡಿಎಂ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದರು.