ಹೈದರಾಬಾದ್, ಫೆ 23 (DaijiworldNews/HR): ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ ಶಾಸಕಿ ಜಿ ಲಾಸ್ಯ ನಂದಿತಾ (37) ಅವರು ಸಾವನ್ನಪ್ಪಿದ್ದಾರೆ.
ನಂದಿತಾ ಅವರು ಪ್ರಯಾಣಿಸುತ್ತಿದ್ದ ಕಾರು ಹೈದರಾಬಾದ್ ನ ಅಮೀನ್ಪುರ ಮಂಡಲದ ಸುಲ್ತಾನ್ಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟರಲ್ಲೇ ನಂದಿತಾ ಅವರು ನಿಧನರಾಗಿದ್ದಾಅರೆ.
ಇನ್ನು ಘಟನೆಯಲ್ಲಿ ಕಾರು ಚಾಲಕ ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.