ಉತ್ತರ ಪ್ರದೇಶ, ಫೆ 25(DajiworldNews/SK): ದೇಶದ ಮಾರುಕಟ್ಟೆಗೆ ಚೀನಾದ ಉತ್ಪನ್ನಗಳು ಲಗ್ಗೆ ಇಡುತ್ತಿರುವುದರಿಂದ ಕುಶಲಕರ್ಮಿಗಳು, ಸ್ಥಳೀಯ ಉದ್ಯಮಗಳು ಮತ್ತು ಗುಡಿ ಕೈಗಾರಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಮೊರಾದಾಬಾದ್ನಿಂದ ಭಾನುವಾರ ಭಾರತ್ ಜೋಡೊ ನ್ಯಾಯ ಯಾತ್ರೆ ಅಲಿಗಢಕ್ಕೆ ತಲುಪಿದೆ. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳೊಂದಿಗೆ ನಂಟು ಹೊಂದಿರುವ ವ್ಯಾಪಾರಿಗಳು, ಭಾರತ ಮಾರುಕಟ್ಟೆಗೆ ಚೀನಾದ ಸರಕುಗಳನ್ನು ತರಿಸುತ್ತಿದ್ದಾರೆ. ಇದ್ದರಿಂದ ಸಣ್ಣ ಉದ್ಯಮಗಳು ನೆಲಕಚ್ಚಿವೆ. ಆದರೆ ದೊಡ್ಡ ಉದ್ಯಮಗಳು ಲಾಭದಾಯಕವಾಗಿಯೇ ನಡೆಯುತ್ತಿವೆ ಎಂದಿದ್ದಾರೆ.
ಇನ್ನು ಮುಂದಿನ ಬಾರಿ ನಾನು ಅಲಿಗಢಕ್ಕೆ ಭೇಟಿ ನೀಡಿದಾಗ ಎಲ್ಲೆಡೆ ‘ಮೇಡ್ ಇನ್ ಚೀನಾ‘ ಬದಲು ‘ಮೇಡ್ ಇನ್ ಅಲಿಗಢ’ ಉತ್ಪನ್ನಗಳನ್ನು ನೋಡಲು ಕಾಣಸಿಗಬೇಕು ಎಂದು ತಿಳಿಸಿದ್ದಾರೆ.