ಬೆಂಗಳೂರು, ಫೆ 25(DajiworldNews/ AK): ಈಗಿನ ಸಂವಿಧಾನವನ್ನು ಬದಲಾಯಿಸಿ ಹೊಸ ಸಂವಿಧಾನವನ್ನು ರಚಿಸುವ ಹುನ್ನಾರ ನಡೆಯುತ್ತಿದೆ .ಮುಂದಿನ ಲೋಕಸಭಾ ಚುನಾವಣೆಯಲ್ಲಿಒಗ್ಗಟ್ಟಾಗಿ, ಗಟ್ಟಿಯಾಗಿ ನಿಲ್ಲದಿದ್ದರೆ ಖಂಡಿತವಾಗಿಯೂ ಮುಂದೊಂದು ದಿನ ದೇಶ ಸರ್ವಾಧಿಕಾರದತ್ತ ಈ ಬಗ್ಗೆ ಜನರು ಎಚ್ಚರಿಕೆಯಿಂದರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ನ ಖರ್ಗೆ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಬದಲಾಯಿಸಲು ಅಥವಾ ಅಳಿಸಿಹಾಕಲು ತುಂಬಾ ಜನ ಪ್ರಯತ್ನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೀವು ಒಗ್ಗಟ್ಟಾಗಿ ಗಟ್ಟಿಯಾಗಿ ನಿಲ್ಲದಿದ್ದರೆ ಸಂವಿಧಾನಕ್ಕೆ ತೊಂದರೆಯಾಗಲಿದೆ. ದೇಶದಲ್ಲಿ ಏಕಾಧಿಪತ್ಯ ಬರಲಿದೆ. ನಿಮಗೆ ಏಕಚಕ್ರಾಧಿಪತ್ಯ ಬೇಕೋ ಅಥವಾ ನ್ಯಾಯವಾಗಿ ಜೀವನ ಸಾಗಿಸಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.
ಆದರೆ ಇವತ್ತು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾ ರವು ಸಂವಿಧಾನವನ್ನು ರಕ್ಷಿಸುತ್ತಿಲ್ಲ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸವೂ ಮಾಡುತ್ತಿಲ್ಲ. ಹೀಗಾಗಿ
ಸಂವಿಧಾನವನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ. ಕೆಲವೊಂದು ಸಿದ್ಧಾಂತಗಳನ್ನು ಹೇರುವ ಮೂಲಕ ನಿಮ್ಮನ್ನು ದಾರಿತಪ್ಪಿಸುವ ಪ್ರಯತ್ನದ ಬಗ್ಗೆ ಎಚ್ಚರವಾಗಿರಬೇಕು ಎಂದರು.