ಗದಗ, ಫೆ 26(DaijiworldNews/SK): ಕೇಂದ್ರ ಸರ್ಕಾರದ ಹಣ ಅವರಪ್ಪನ ಮನೆ ಆಸ್ತೀನಾ?ʼ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸಿಎಂ ಪುತ್ರ ಯತೀಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? ಕರ್ನಾಟಕ ಜನತೆ ಕಟ್ಟಿದ ತೆರಿಗೆ ಹಣ ಅದು. ಕೇಂದ್ರ ಸರ್ಕಾರ ಎಲ್ಲರಿಗೂ ನ್ಯಾಯವಾಗಿ ಹಂಚಿಕೆ ಮಾಡಲಿ ಅಂತ ಕೇಳ್ತಿದ್ದೇವೆ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಿ, ನಾವು ಬೇಡ ಎಂದು ಹೇಳುದಿಲ್ಲ. ಆದ್ರೆ ನಮಗೆ ಅನ್ಯಾಯ ಆಗ್ತಿದೆ, ಅದಕ್ಕೆ ಮೊದಲು ನ್ಯಾಯ ಒದಗಿಸಿ ಎಂದಿದ್ದಾರೆ.
ಇನ್ನು ನಾವು 1 ರೂಪಾಯಿ ತೆರಿಗೆ ಹಣ ನೀಡಿದ್ರೆ, ನಮಗೆ 12 ಅಥವಾ 13 ಪೈಸೆ ಅಷ್ಟೇ ಬರ್ತಿದೆ, 25 ಪೈಸೆಯನ್ನಾದ್ರೂ ಕೊಡಿ ಅಂತ ಕೇಳ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.