ನವದೆಹಲಿ, ಫೆ 26(DaijiworldNews/AK): ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅರೆಕಾಲಿಕ ನಾನ್ ಎಕ್ಸಿಕ್ಯೂಟಿವ್ ಅಧ್ಯಕ್ಷ ಸ್ಥಾನದಿಂದ
ವಿಜಯ್ ಶೇಖರ್ ಶರ್ಮ ಅವರು ಕೆಳಗಿಳಿದಿದ್ದಾರೆ. ಬ್ಯಾಂಕ್ ಮಂಡಳಿಯನ್ನು ಪುನರ್ ರಚಿಸಲಾಗಿದೆ.
ಮಾರ್ಚ್ 15 ರ ನಂತರದ ಯಾವುದೇ ಗ್ರಾಹಕರಿಂದ ಠೇವಣಿ ಮತ್ತು ಕ್ರೆಡಿಟ್ಗಳನ್ನು ಸ್ವೀಕರಿಸದಂತೆ ರಿಸರ್ವ್ ಬ್ಯಾಂಕ್ ಪಿಪಿಬಿಎಲ್ ಅನ್ನು ನಿರ್ಬಂಧಿಸಿದೆ.
ಮಾಜಿ ಸೆಂಟ್ರಲ್ ಬ್ಯಾಂ ಕ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀ ನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ಮಾಜಿ ಐಎಎಸ್ ಅಧಿಕಾರಿ ರಜನಿ ಸೆಖ್ರಿ ಸಿಬಲ್ ಅವರನ್ನು ನೇಮಕ ಮಾಡಿ ಪಿಪಿಬಿಎಲ್ ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್ ರಚಿಸಿದೆ ಎಂದು ಪೇಟಿಎಂ ಹೇಳಿದೆ.