ಕೋಲ್ಕತ್ತಾ, ಫೆ 29(DaijiworldNews/MS): ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶಾಜಹಾನ್ ಶೇಖ್ನನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
55 ದಿನಗಳಿಂದ ತಲೆಮರೆಸಿಕೊಂಡಿದ್ದ ಶಾಜಹಾನ್ ಮೇಲೆ ವಿಶೇಷ ತಂಡವು ಆತನಚಲನವಲನಗಳ ಮೇಲೆ ಹಲವು ದಿನಗಳಿಂದ ಕಣ್ಣಿಟ್ಟಿತ್ತು. ಇದೀಗ ವಿಶೇಷ ಪಡೆಯು 'ಉತ್ತರ 24 ಪರಗಣ' ಜಿಲ್ಲೆಯಲ್ಲಿ ತಡರಾತ್ರಿ ಬಂಧಿಸಿ ಬಳಿಕ ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ದಿದೆ.
ಭಾರಿ ಸಂಖ್ಯೆಯ ಮಹಿಳೆಯರು ಟಿಎಂಸಿ ನಾಯಕ ಹಾಗೂ ಆತನ ಬೆಂಬಲಿಗರು, ಬಲವಂತವಾಗಿ ತಮ್ಮ ಭೂಕಬಳಿಕೆಮಾಡಿದ್ದಾರೆ ಮತ್ತು ಲೈಂಗಿಕ
ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ, 'ಉತ್ತರ 24 ಪರಗಣ' ಜಿಲ್ಲೆಯ ಸಂದೇಶ್ಖಾಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿತ್ತು.2019ರಲ್ಲಿ ನಡೆದ ಬಿಜೆಪಿಯ ಮೂವರು ಕಾರ್ಯಕರ್ತರ ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶೇಖ್, ಜನವರಿ 5ರಿಂದನಾಪತ್ತೆಯಾಗಿದ್ದ. ಶೇಖ್, ಪಡಿತರ ಅಕ್ರಮ ಹಾಗೂಭೂಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವೂ ಪ್ರ ಕರಣ ದಾಖಲಿಸಿಕೊಂಡಿತ್ತತು. ಇಡಿ ಅಧಿಕಾರಿಗಳು ತೆರಳಿದಾಗ ಈ ವಿಚಾರ ಮೊದಲೇ ಗೊತ್ತಾಗಿ ಆತ ತಲೆಮರೆಸಿಕೊಂಡಿದ್ದ. ಇಡಿ ದಾಳಿಯ ಸಂದರ್ಭ ದಲ್ಲಿ ಶಹಜಹಾನ್ ಬೆಂಬಲಿಗರು ಇಡಿ ಅಧಿಕಾರಿಗಳು ಮತ್ತು ಸಿಎಪಿಎಫ್ ಮೇಲೆಯೇ ಹಲ್ಲೆ ನಡೆಸಿದ್ದರು.